ಸ್ವಪ್ನಾ ಬರ್ಮನ್ (ಜನನ ೨೯ ಅಕ್ಟೋಬರ್ ೧೯೯೬) ಒಬ್ಬ ಭಾರತೀಯ ಹೆಪ್ಟಾಥ್ಲೀಟ್. ಅವರು ೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು ಮತ್ತು ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್ ನ ಹೆಪ್ಟಾಥ್ಲಾನ್ ನಲ್ಲಿ ಮೊದಲನೆಯ ಸ್ಥಾನವನ್ನು ಪಡೆದರು. ಗೋಸ್ಪೋರ್ಟ್ಸ್ ಫೌಂಡೇಶನ್ ಇವರಿಗೆ ರಾಹುಲ್ ದ್ರಾವಿಡ್ ಕ್ರೀಡಾಪಟು ಮಾರ್ಗದರ್ಶಿ ಕಾರ್ಯಕ್ರಮದ ಮೂಲಕ ಬೆಂಬಲವನ್ನು ನೀಡಿದ್ದಾರೆ. ಭಾರತದ ಸ್ವಪ್ನಾ ಬರ್ಮನ್ ರವರು ಇಂಡೋನೇಷ್ಯಾದಲ್ಲಿ ನಡೆದ ೨೦೧೮ ರ ಏಷ್ಯನ್ ಗೇಮ್ಸ್ ನಲ್ಲಿ ವಿಮೆನ್ಸ್ ಹೆಪ್ಟಾಥ್ಲಾನ್ ಚಿನ್ನದ ಪದಕವನ್ನು ಗೆದ್ದರು. == ಜನನ == ಸ್ಪಪ್ನಾ ರವರು ಪಶ್ಚಿಮ ಬಂಗಾಳದ ಜಲ್ಪೈಗುರಿ ಎಂಬಲ್ಲಿ ೨೯ ಅಕ್ಟೋಬರ್ ೧೯೯೬ ರಂದು ಜನಿಸಿದರು. == ಜೀವನ == ಅವರ ತಂದೆ ಪಂಚನನ್ ಬರ್ಮನ್ ಒಬ್ಬ ರಿಕ್ಷಾ ಚಾಲಕ ಮತ್ತು ಅವರ ತಾಯಿ ಬಸಾನಾ ರವರು ಚಹಾದ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಟ್ರೋಕ್ ನಿಂದ ಬಳಲುತ್ತಿದ್ದ ಅವರ ತಂದೆ ಸ್ವಲ್ಪ ಸಮಯದ ನಂತರ ಹಾಸಿಗೆ ಹಿಡಿದರು. ನಂತರ ನಾಲ್ಕು ಮಕ್ಕಳ ಪೋಷಣೆ ಮಾಡಲು ಅವರಿಂದ ಸಾಧ್ಯವಾಗಲ್ಲಿಲ್ಲ. ಸ್ಪಪ್ನಾ ರವರ ಎರಡು ಕಾಲುಗಳಲ್ಲೂ ಆರು ಬೆರಳುಗಳಿರುವುದರಿಂದಾಗಿ ಅವರು ತುಂಬಾ ನೋವನ್ನು ಅನುಭವಿಸಿದರು. ಅವರ ಅಸಾಮಾನ್ಯ ಕಾಲುಗಳಿಂದಾಗಿ ಅವರಿಗೆ ಹೆಚ್ಚಿನ ವ್ಯಾಪಕದ ಬೂಟುಗಳನ್ನು ಖರೀದಿಸಲಾಗಲಿಲ್ಲ. ಸ್ವಪ್ನಾ ರವರು ತಾನು ಗೆದ್ದ ಬಹುಮಾನದ ನಗದನ್ನು, ಕಾಂಕ್ರೀಟ್ ಗೋಡೆ ಇಲ್ಲದೆ ವಾಸಿಸುತ್ತಿದ್ದ ತನ್ನ ಕುಟುಂಬವನ್ನು ನೋಡಿಕೊಳ್ಳಲು ಉಪಯೋಗಿಸುತ್ತಿದ್ದರು. ಅಥ್ಲೆಟಿಕ್ಸ್ ನಲ್ಲಿ ಅವರ ಯಶಸ್ಸನ್ನು ಗುರುತಿಸಿ ೨೦೧೬ ರಲ್ಲಿ ಅವರು ಸರಕಾರದಿಂದ ೧,೫೦,೦೦೦ ರೂಪಾಯಿಗಳನ್ನು ವಿದ್ಯಾರ್ಥಿವೆತನವಾಗಿ ಪಡೆದರು. ಪ್ರಸ್ತುತವಾಗಿ ಇವರು ಕೊಲ್ಕತ್ತಾದಲ್ಲಿನ ಸ್ಪೋರ್ಟ್ಸ್ ಅಥೋರಿಟಿ ಆಫ್ ಇಂಡಿಯಾ ಕ್ಯಾಂಪಸ್ ನಲ್ಲಿ ತರಬೇತಿ ನೀಡುತ್ತಿದ್ದಾರೆ. ತನ್ನ ದವಡೆಯಲ್ಲಿ ಗಾಯವಿದ್ದರೂ ಅದನ್ನು ಹೊರತುಪಡಿಸಿ ಅವರು ೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದರು. ೨೦೧೭ ರ ಏಷ್ಯನ್ ಅಥ್ಲೆಟಿಕ್ಸ್ ಚ್ಯಾಂಪಿಯನ್ಷಿಪ್ - ವಿಮೆನ್ಸ್ ಹೆಪ್ಟಾಥ್ಲಾನ್ (೮೦೦ ಮೀ.)ನ ಅಂತಿಮ ಈವೆಂಟ್ ನಲ್ಲಿ ಇವರು ಕುಸಿದರು. ಆದರೆ ಸ್ವಪ್ನಾ ರವರು ತನ್ನ ವೈಯಕ್ತಿಕ ದಾಖಲೆಗಳನ್ನು ಮುರಿದು ಹಿಂದಿನ ಆರು ಈವೆಂಟ್ ಗಳಿಂದ ಸಾಕಷ್ಟು ಅಂಕಗಳನ್ನು ಗಳಿಸಿ, ೮೦೦ ಮೀ. ಓಟದಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದರು. == ಸಾಧನೆಗಳು == ೨೦೧೭ ಏಷ್ಯನ್ ಅಥ್ಲೆಟಿಕ್ಸ್ ಚ್ಯಾಂಪಿಯನ್ಷಿಪ್ಸ್ ಪಟಿಯಾಲ ಫೆಡರೇಷನ್ ಕಪ್ ಏಷ್ಯನ್ ಗೇಮ್ಸ್ ೨೦೧೮ ರ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕದ ಗೆಲುವಿಗೆ ಬಹುಮಾನಗಳು ಪಶ್ಚಿಮ ಬಂಗಾಳದ ಸರಕಾರದಿಂದ ಹತ್ತು ಲಕ್ಷ ರೂಪಾಯಿ( $ 14,000). == ಉಲ್ಲೇಖಗಳು ==